ದೇಣಿಗೆ

ಯಾವುದೇ ಕಾರ್ಯಕ್ರಮವು ಯಶಸ್ವಿಯಾಗಬೇಕಾದರೆ, ಹಣಕಾಸು ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ; ಇದಕ್ಕೆ ಕಹಳೆ ಹೊರತಲ್ಲ. ಈ ಕಾರ್ಯಕ್ರಮಕ್ಕೆ ತಗಲುವ ಎಲ್ಲಾ ವೆಚ್ಚಗಳನ್ನು ಅನೇಕ ಸಹೃದಯೀ ಕನ್ನಡಿಗರು ಹಾಗೂ ಉದಾರಿ ಸಂಘ-ಸಂಸ್ಥೆಗಳ ನೆರವಿನಿಂದ ಕಹಳೆ ತಂಡವು ಸ್ವತಂತ್ರವಾಗಿ ಭರಿಸುತ್ತಲಿದೆ.

ಕಹಳೆ ಕಾರ್ಯಕ್ರಮದ ಬಗ್ಗೆ ತಿಳಿದ ಹಲವು ಕನ್ನಡಿಗರು ಧನಸಹಾಯ ಒದಗಿಸಲು ಮುಂದಾಗುತ್ತಿರುವುದು ಸಂತಸದ ವಿಚಾರವಾಗಿದೆ. ನೀವೂ ಸಹ ಈ ಕಾರ್ಯಕ್ರಮಕ್ಕೆ ಧನಸಹಾಯ ಮಾಡಲು ಇಚ್ಛಿಸುವಿರಾದರೆ, ದಯವಿಟ್ಟು ನಿಮ್ಮ ದೇಣಿಗೆಯನ್ನು ಕೆಳಕಂಡ ನಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲು ಕೋರಿದೆ.

ಬ್ಯಾಂಕ್ ಹೆಸರು: ಕೆನರಾ ಬ್ಯಾಂಕ್
ಶಾಖೆ: ಹೆಸರಘಟ್ಟ, ಬೆಂಗಳೂರು
ಖಾತೆಯ ಹೆಸರು: ಕನ್ನಡ ಕಹಳೆ ಸಂಘ
ಉಳಿತಾಯ ಖಾತೆ ಸಂಖ್ಯೆ: 3404101004631
MICR ಸಂಕೇತ: 560015179
IFSC ಸಂಕೇತ: CNRB0003404

ನಮ್ಮ ಬ್ಯಾಂಕ್ ಖಾತೆಗೆ ದೇಣಿಗೆ ಸಂದಾಯ ಮಾಡಿದ ನಂತರ, ದಯವಿಟ್ಟು ನಿಮ್ಮ ಹೆಸರು, ಪೂರ್ಣ ವಿಳಾಸ (ಪಿನ್-ಕೋಡ್ ಸಹಿತ) ಮತ್ತು ಚರ ದೂರವಾಣಿ ಸಂಖ್ಯೆಯನ್ನು ನಮ್ಮ ಮಿಂಚಂಚೆ ವಿಳಾಸ blow@kahale.gen.in ಕ್ಕೆ ಕಳುಹಿಸಲು ವಿನಂತಿಸಿದೆ.

ದೇಣಿಗೆ ಪಡೆದ ಸಂಪೂರ್ಣ ಮೊತ್ತವನ್ನು ಕಹಳೆ ಪುಸ್ತಕಗಳ ಮುದ್ರಣಕ್ಕಾಗಿ ಮಾತ್ರ ವಿನಿಯೋಗ ಮಾಡಲಾಗುವುದು. ಕಾರ್ಯಕ್ರಮದ ಇನ್ನಿತರೆ ಎಲ್ಲಾ ವೆಚ್ಚಗಳನ್ನು ಕಹಳೆ ತಂಡವೇ ಭರಿಸುವುದು.

ದೇಣಿಗೆ ನೀಡಿ ಪ್ರೋತ್ಸಾಹಿಸಿದವರು:
  1. ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ
  2. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ
  3. ಸೃಷ್ಟಿ ಮೀಡಿಯಾ, ಯಲಹಂಕ, ಬೆಂಗಳೂರು
  4. ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ
  5. ಶ್ರೀ ವೆಟ್-ಲೈಫ್ ಫಾರ್ಮ, ಗಂಗಾನಗರ, ಬೆಂಗಳೂರು
  6. ಅದಿತಿ ಸ್ಪೈಸಸ್, ಕೆ. ಜಿ. ಹಳ್ಳಿ, ಬೆಂಗಳೂರು