ಸೋಮವಾರ, ನವೆಂಬರ್ 6, 2017

ನಮ್ಮ ಶಾಲೆಯ ಸ್ವಚ್ಛತೆ

ನಮ್ಮ ಶಾಲೆಯನ್ನು ನಾವು ಪ್ರತಿ ದಿನ ಸ್ವಚ್ಛವಾಗಿರಿಸುತ್ತೇವೆ. ನಾವು ಶಾಲೆಯ ಸುತ್ತ-ಮುತ್ತ ಇರುವ ಕಸಕಡ್ಡಿಯನ್ನು ಎತ್ತಿ ಕಸದ ಗುಂಡಿಗೆ ಹಾಕುತ್ತೇವೆ. ಕೊಠಡಿಗಳ ಒಳಗಿನ ಧೂಳನ್ನು ಕೊಡವಿ, ಕಸವನ್ನು ಗುಡಿಸಿ, ಕಸದ ಗುಂಡಿಗೆ ಹಾಕುತ್ತೇವೆ. ಶಾಲೆಯ ಆವರಣವನ್ನೂ ಸಹಾ ಸ್ವಚ್ಛವಿರಿಸುತ್ತೇವೆ. ಶಾಲೆಯ ಮುಂದಿರುವ ಚರಂಡಿಯನ್ನು ಪ್ರತಿ ತಿಂಗಳಿಗೊಮ್ಮೆ ಸ್ವಚ್ಛಗೊಳಿಸುತ್ತೇವೆ. ನಮ್ಮ ಶಾಲೆಯಲ್ಲಿ ಮುಂಭಾಗ ಮತ್ತು ಹಿಂಭಾಗದಲ್ಲಿ ಗಿಡಮರಗಳನ್ನು ನೆಟ್ಟು, ಅವುಗಳಿಗೆ ಪ್ರತಿ ದಿನ ನೀರು ಹಾಕುತ್ತೇವೆ. ಮತ್ತು ಪ್ರತಿ ದಿನ ಗಿಡಗಳ ಸುತ್ತ ಇರುವ ಕಳೆಯನ್ನು ಕಿತ್ತು ಕಸದ ಗುಂಡಿಗೆ ಹಾಕುತ್ತೇವೆ. ಗಿಡಗಳನ್ನು ಸ್ವಚ್ಛತೆಯಿಂದ ಕಾಪಾಡುತ್ತೇವೆ.
ಚಿತ್ರ ಕೃಪೆ : Google
ಶಾಲೆಗೆ ಎಲ್ಲ ಮಕ್ಕಳು ಸ್ವಚ್ಛವಾಗಿ ಮತ್ತು ಶುದ್ಧವಾಗಿ ಸಮವಸ್ತ್ರವನ್ನು ಧರಿಸಿ ಬರುತ್ತಾರೆ. ನಮ್ಮ ಶಾಲೆಯಲ್ಲಿ ಎಲ್ಲರೂ ಊಟ ಮಾಡುವ ಮುನ್ನ ಮತ್ತು ಊಟವಾದ ನಂತರ ಸಾಬೂನಿನಿಂದ ಕೈ ತೊಳೆಯುತ್ತೇವೆ. ನಾವು ಇತರರಿಗೆ ಸ್ವಚ್ಛತೆಯ ಅರಿವು ಮೂಡಿಸುತ್ತೇವೆ.

ನಾವು ನಮ್ಮ ಶಾಲೆಯನ್ನಲ್ಲದೆ ನಮ್ಮ ಪರಿಸರವನ್ನೂ ಸ್ವಚ್ಛವಾಗಿರಿಸಬೇಕು. ನಮ್ಮ ಶಾಲೆಯಲ್ಲಿ ಪ್ರತಿ ವರ್ಷಕ್ಕೊಮ್ಮೆ ಗಾಂಧೀಜಿಯವರ ಜನ್ಮದಿನದಂದು ಸ್ವಚ್ಛ ಭಾರತ್ ಅಭಿಯಾನ ಕಾರ್ಯಕ್ರಮ ಆಚರಿಸುತ್ತೇವೆ. ನಾವು ಪ್ರತಿ ನಿತ್ಯ ಸ್ವಚ್ಛವಾಗಿರಬೇಕು ಮತ್ತು ನಮ್ಮ ಶಾಲೆಯನ್ನು ಸ್ವಚ್ಛತೆಯಿಂದಿರಿಸಬೇಕು. ನಾವು ಸ್ವಚ್ಛವಾಗಿದ್ದರೆ ಸಾಲದು, ನಮ್ಮ ಸುತ್ತ ಮುತ್ತಲಿನ ಪರಿಸರವನ್ನೂ ಸ್ವಚ್ಛವಾಗಿ ಮಾಡಬೇಕು. ಶಾಲೆಯು ದೇವಾಲಯವಿದ್ದಂತೆ.

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ ವಾಸವಿ, ಎಸ್.

8ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

2 ಕಾಮೆಂಟ್‌ಗಳು: